
2nd April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಎ.1-ಈ ವರ್ಷದ ಫಲಾಫಲ ಕುರಿತು ತಾಲೂಕಿನ ಶಿರೂರ ಪಟ್ಟಣದಲ್ಲಿ ವಸಂತರಾವ್ ಕಡಿವಾಲ ಆಚಾರ್ಯರು ಭವಿಷ್ಯ ನುಡಿದಿದ್ದು, ಈ ಬಾರಿ ಉತ್ತಮ ಮಳೆ ಹಾಗೂ ಬೆಳೆ ಬರಲಿದ್ದು, ಎಲ್ಲವೂ ಸಮೃದ್ಧವಾಗಿದೆ ಎಂದಿದ್ದಾರೆ.
ಯುಗಾದಿ ಮರಿಪಾಡ್ಯೆ ದಿನವಾದ ಸೋಮವಾರ ಪಟ್ಟಣದ ಕಮ್ಮಾರ ಓಣಿಯ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾAಗ ಓದುವ ಮೂಲಕ ವರ್ಷದ ರಾಶಿಫಲವನ್ನು ಹೇಳಿದರು.
ರೈತರಿಗೆ ಸಕಾಲಕ್ಕೆ ಅನುಕೂಲವಾಗುವ ಮಳೆಗಳು ಉತ್ತಮವಾಗಿ ಆಗಲಿವೆ. ರೈತರು ಕೃಷಿಗೆ ಒತ್ತು ನೀಡಬೇಕು. ಒಳ್ಳೆಯ ಭವಿಷ್ಯವಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಜನರಲ್ಲಿ ಭಕ್ತಿ, ಭಾವ, ಧಾರ್ಮಿಕತೆ ಹೆಚ್ಚಾಗಲಿದೆ. ಸು:ಖ, ಶಾಂತಿ, ನೆಮ್ಮದಿಯ ಕಾಲ ಇದಾಗಲಿದೆ ಎಂದು ಕಡಿವಾಲ ಆಚಾರ್ಯರು ನುಡಿದರು.
ಯುಗಾದಿಯ ಈ ಭವಿಷ್ಯಕ್ಕೆ ಬಾಬುದಾರ ಕುಟುಂಬದವರು ಹಾಗೂ ಪಟ್ಟಣದ ಹಿರಿಯರನ್ನು ಬಾಜಾ, ಭಜಂತ್ರಿಯೊAದಿಗೆ ಚಾವಡಿಗೆ ಕರೆತರಲಾಯಿತು. ಅಲ್ಲಿ ನೂತನ ವರ್ಷದ ಪಂಚಾAಗಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವಸಂತರಾವ ಕಡಿವಾಲ ಆಚಾರ್ಯರು ಪಂಚಾAಗ ಓದಿ ಫಲಾಫಲ ತಿಳಿಸಿದರು.
ಸುರೇಶ ದೇಸಾಯಿ, ಶ್ರೀನಿವಾಸ ಇನಾಂದಾರ, ತಿಪ್ಪಣ್ಣ ಪಟ್ಟಣಶೆಟ್ಟಿ, ಪ್ರಭಾಕರ ಕುಲಕರ್ಣಿ, ಯಂಕಪ್ಪ ಶಿಂಪಿ, ವೆಂಕಟರಾವ್ ಕುಲಕರ್ಣಿ, ಸಿದ್ದಯ್ಯ ಎಮ್ಮಿಮಠ, ಯರಗುರದಪ್ಪ ಹೊಸಮನಿ, ಶಿವಪ್ಪ ಅಚನೂರ, ಭೀಮಪ್ಪ ಬೊಮ್ಮಣಗಿ, ಕುಮಾರ ನಾಶಿ, ಮಲ್ಲಿಕಾರ್ಜುನಯ್ಯ ಗಣಾಚಾರಿ, ಹೇಮಣ್ಣ ಪೂಜಾರ, ಮುಕುಂದ ಪೂಜಾರ, ವೆಂಕಟೇಶ ಪೂಜಾರ ಮತ್ತಿತರರು ಇದ್ದರು.
ಪೋಲಿಸ್ ಧ್ವಜ ದಿನಾಚರಣೆ ಶಿಸ್ತು, ಶೃದ್ಧೆ, ಕರ್ತವ್ಯನಿಷ್ಠೆ ಬೆಳೆಸಿಕೊಳ್ಳಿ-ಗುಡ್ಡಳ್ಳಿ